ನನ್ನ ಸಣ್ಣ ಚುಟುಕು ಪದ್ಯಗಳು….

30 10 2007

____________________________________________________

lovebirds.jpg ಕಲಿಕೆ

ಚಿಲಿಪಿಲಿ ಹಾಡುತ ಹಾರುತ್ತಿರುವ ಈ ಹಕ್ಕಿಗಳು…..
ಕಟ್ಟಿ ಕೊಟ್ಟಿವೆ ನನಗಾಗಿ ಸಾವಿರಾರು ಕನಸುಗಳು….
ದುಂಬಿಗಳು ಚುಂಬಿಸುತ್ತಿರುವ ಈ ಸುಂದರ ಹೂವುಗಳು……
ಹೇಳಿ ಕೊಟ್ಟಿವೆ ನನಗೆ ಪ್ರೀತಿಯ ನೂರಾರು ನುದಿಗುಟ್ಟುಗಳು.

chilipili haadutha haaruttiruva ee hakkigaLu……
kattikottive nanagaagi saaviraaru kanasugaLu…..
dhumbigalu chumbisuttiruva ee sundara hoovugaLu…..
heLi kottive nanage preethiya nooraaru nudiguttugaLu.

_____________________________________________________

sunrise.jpg ರವಿ ಕಿರಣ

ಕವಿತೆಗಳ ಬರೆಯಲು ಬೇಕು ಒಂದಾದರೂ ಪ್ರೇರಣ…
ಅದಕಾಗಿ ಪರಿತಪಿಸಿತು ನನ್ನೀ ತನು ಮನ…
ಸಿಗಲಿಲ್ಲ ವೆಂಬುದು ಆಯಿತು ದುಕ್ಕಕ್ಕೆ ಕಾರಣ ….
ಆಗಲೇ ಸಿಕ್ಕಿದ್ದು ವಿಷಯ ರವಿಯ ಕಿರಣ .

kavithegaLa bareyalu beku ondaadaru preraNa….
adakkaagi paritapisitu nanni tanu mana…..
sigallillavembudu aayitu dukkhakke kaaraNa…..
aagale sikkiddu vishaya raviya kiraNa.

_____________________________________________________

light.jpg ಮಿಂಚು

ಮೋಡಗಳ ಮರೆಯಲ್ಲಿ ಕೂತು ಮಾಡುತಿರುವುದು ಸಂಚು …..
ಯಾರ ಮೇಲೆ ಎರಗಲಿ ಎಂದು ಹಾಕಿರುವುದು ಹೊಂಚು ….
ನನಗೊಬ್ಬನಿಗೆ ಯಾಕೆ …? ನಿನಗೊಬ್ಬನಿಗೆ ಯಾಕೆ …? ಎಲ್ಲರಲ್ಲೂ ಹಂಚು
ಎನ್ನುತಿಹುದು ಆ ಬಾನಲ್ಲಿ ಗುಡಿಗಿನೊಂದಿಗೆ ಮಿಂಚು

modagaLa mareyalli kootu maaduthiruvudu sanchu…..
yaara mele yaragali yendu haakiruvudu honchu…..
nanagobbanige yaake ? ninagobbanige yaake ?? yellarallu hanchu…..
yennuthihudu aa baanalli gudiginondige minchu.

_____________________________________________________

dreamgirl.jpg ಕನಸಿನ ಕನ್ಯೆ

ಎತ್ತಲಿಂದಲೋ ಬೀಸಿದ ಗಾಳಿಯ ಹಾಗೆ …
ಮೈ ಮನಕೆ ತಂಪೇರಿ ನಡುಕ ಹುಟ್ಟಿದ ಹಾಗೆ ….
ಮನಸಿನ ಭಾವನೆಗಳ ಗೂಡಲ್ಲಿಯ ಛಾಯೆ ….
ನೀ ನನಗೆ ಸಿಗಬಾರದೆ ಕನಸಿನ ಕನ್ಯೆ.

yettalindalo beesida gaaLiya haage…..
mai manake tamperi naduka huttida haage….
manassina bhaavanegala goodalliya chaaye…..
nee nanage sigabaarade kanasina kanye.

_____________________________________________________

lostgirl.jpg ಸೋತು ಗೆದ್ದವಳು

ಪ್ರೀತಿ ಪ್ರೇಮ ತಿಳಿಯದ ಅವಳು…
ಸ್ನೇಹ ಸಂಭಂದವನ್ನು ಬಯಸುವ ಅವಳು…
ಹೃದಯದ ಮಿಡಿತವನ್ನು ಬಲ್ಲವಳು…
ನನ್ನೋಟ್ಟಿಗೆ ಮಾತಿನಲ್ಲಿ ಸೋತು ಗೆದ್ದವಳು.

preethi prema thiLiyada avaLu…..
sneha sambandavannu bayasuva avaLu….
hrudayada midithavannu ballavaLu….
nannottige maatinalli sothu geddavaLu.

_____________________________________________________

forest.jpg ನಾಡು

ಬಾಳೊಂದು ನಂದನ….
ಅನುರಾಗ ಬಂಧನ…..
ಉಳಿಸಿದರೆ ಈ ನಾಡ ವನ……
ಅರಳುವುದು ನಮ್ಮೆಲ್ಲೆರ ತನು ಮನ.

baaLondu nandana…..
anuraaga bandana…..
uLisidare ee naada vana….
aruLuvudu nammelara tanu mana.

_____________________________________________________

wish.jpg ಆಶಯ

ಮೂಡಣದಿ ಉದಯಿಸುವ ಸೂರ್ಯನಂತೆ……
ಬೆಳದಿಂಗಲಿನೆಡೆಗೆ ಚಲಿಸುವ ಚಂದ್ರನಂತೆ…..
ಹರ್ಷೊಲ್ಲಾಸದಿಂದ ಅರಳುವ ಹೂವಿನಂತೆ……
ನಿನ್ನಿ ಬದುಕು ಸದಾ ನಗುವಿನಿಂದ ಕೂಡಿರಲಿ.

moodanadi udaisuva suryanante…..
beladingalinadege chalisuva chandranante…..
harshollaasadinda aruLuva hoovinante…..
ninna baduku sadaa naguvininda koodirali.

_____________________________________________________

heart.jpg ಮನದಾಸೆ

ಮುಂಗಾರಿನ ಮಿಂಚಿನಂತೆ ಬಂದೆ……..
ಜೀವನದಲ್ಲಿ ಉಲ್ಲಾಸವನ್ನು ತಂದೆ……..
ಕಣ್ಣಲ್ಲಿ ಕನಸಾಗಿ ಮೆರೆದೆ….
ಕಡಲಲ್ಲಿ ಅಲೆಯಾಗಿ ಹೋದೆ.

mungaarina minchinante bande…..
jeevanadalli ullaasavannu tande…..
kaNNalli kanasaagi merede…..
kadalalli aleyaagi hode.

_____________________________________________________

dream2.jpg ಕನಸು

ಈ ಸುಂದರವಾದ ಜೀವನದಲ್ಲಿ………..
ನಿನ್ನದು ನನ್ನದು ಎನ್ನುವುದೆಲ್ಲಿ……..
ನೂರಾರು ಕನಸುಗಳು ಮನಸಿನಲ್ಲಿ…….
ನಾನಿಲ್ಲವಾದೆ ಅದೆಲ್ಲ ನನಸಾಗುವುದರಲ್ಲಿ.

ee sundara jeevanadalli……
ninnadu nannadu yennuvudelli……
nooraaru kanasugaLu manassinalli…..
naanillavaade adella nanasaaguvudaralli.

_____________________________________________________

remember.jpg ನೆನಪು

ಮನಸ್ಸೆಂಬ ಸಾಗರದಲ್ಲಿ……
ನೆನಪುಗಳೆಂಬ ಅಲೆಗಳು…….
ಭೋರ್ಗರೆಯುತ್ತಾ ಅಪ್ಪಳಿಸುತ್ತಿವೆ……
ಈ ನನ್ನ ಹೃದಯವೆಂಬ ಬಂಡೆಗೆ.

manassemba saagaradalli……
nenapugalemba alegaLu…..
bhorgareyutta appalisuttive…..
ee nanna hrudayavemba bandege.

_____________________________________________________

dumb.jpg ಗೊತ್ತಿಲ್ಲ

ಏಕೋ ಎನೊ ಗೊತ್ತಿಲ್ಲ…..
ಪ್ರೀತಿಯೆಂದರೆ ತಿಳಿದಿಲ್ಲ…..
ಪ್ರೇಮದ ಬಗ್ಗೆ ಅರಿವಿಲ್ಲ….
ಈ ಎರಡರ ಪರಿವೆ ನನಗಿಲ್ಲ.

yeko yeno gottilla…..
preetiyendare thilidilla…..
premada bagge arivilla…..
ee eradara parive nanagilla.

_____________________________________________________

sin.jpg ಚೂರು ಪಾರು

ಈ ಲೋಕವೆಂಬುದು ಒಂದು ತೇರು….
ಇಲ್ಲಿ ಆಗುವವರು ನೂರು….
ಆಗಲಾಗದವರು ಸಾವಿರಾರು…..
ಪಾಪಗಳು ಸೇರು…..ಇನ್ನು ಪುಣ್ಯ ಸಿಕ್ಕರೆ ಚೂರು ಪಾರು.

ee lokavembudu ondu theru……
illi aaguvavaru nooru…..
aagalaagadavaru saaviraaru…..
paapagaLu seru….innu punya sikkare chooru paaru.

_____________________________________________________

1.jpg ಕೋರಿಕೆ

ನಿನ್ನ ನೆನಪು ನನಗೆ ಸದಾ ಸೊಗಸು….
ಆದರೆ ಏಕೆ ನಿನಗೆ ನನ್ನ ಮೇಲೆ ಮುನಿಸು….
ನನ್ನ ತಪ್ಪಿದ್ದರೆ ನೇರವಾಗಿ ಶಪಿಸು….
ಇಬ್ಬರ ನಡುವಿನ ಬೇಧ ಅಂತ್ಯ ಗೊಳಿಸು.

ninna nenapu nanage sada sogasu……
aadare yeke ninage nanna mele munisu…..
nanna tappiddare neravaagi shapisu…..
ibbara naduvina bedha anthya goLisu.

_____________________________________________________

ಒಬ್ಬಂಟಿಗ

ಮನಸ್ಸು ಇಂದು ಯಾಕೋ ಆಗಿದೆ ಒಂದೇ….
ಅನಿಸುತಿದೆ ನಾ ಯಾಕೆ ಇಲ್ಲಿ ಬಂದೆ……
ಎಲ್ಲಾ ಮದುರ ನೆನಪುಗಳ ಹಿಂದೆ……
ಸಾಗುತಿದೆ ಬದುಕು ಮುಂದೆ ಮುಂದೆ.

manassu indu yaako aagide onde…..
anisuthide naa yaake illi bande…..
yella madura nenapugala hinde…..
saaguthide baduku mundhe mundhe.

_____________________________________________________

ನಿನಗಾಗಿ

ಮನಸ್ಸಿನಲ್ಲಿ ಮೂಡಿದ ಆಸೆ ಒಂದೇ ಒಂದು…..
ತಂಪಾದ ತಂಗಾಳಿಯ ಅನುಭವವ ತಂದು…..
ಕಾಡಿತು ಹಗಲಿರುಳು ಯಾರು ನೀನು ಎಂದು….
ಸಿಗಲಿಲ್ಲ ನೀ ಇದ್ದರು ನನ್ನ ಹಿಂದು ಮುಂದು.

manassinalli moodida aase onde ondu……
tampaada tangaaLiya anubavava tandu…..
kaaditu hagaliruLu yaaru neenu yendu….
sigalilla nee iddaru nanna hindu mundu.

_____________________________________________________

ನಿನ್ನಾಟ

ಬೀರಬೇಡ ಆ ಕಳ್ಳ ನೋಟ….
ಕೊಡಬೇಡ ನೀ ಹೀಗೆ ಕಾಟ….
ಮಾಡಬೇಡ ಪ್ರೀತಿಯ ಮಾಟ….
ಕಲಿಸಬೇಡ ಪ್ರೇಮ ಪಾಠ.

beerabeda aa kaLLa nota……
kodabeda nee heege kaata….
maadabeda preetiya maata….
kalisabeda prema paata.

_____________________________________________________

ಹೊಸತನ

ನೋಡು ನೋಡುತ ನಿನ್ನೆಯ ನಯನ….
ಹೃದಯದಿ ಅರಳಿದೆ ಉಲ್ಲಾಸದ ಚೇತನ….
ಮೂಡಿಸಿದೆ ಮೊಗದಲ್ಲಿ ನಗುವಿನ ಸಿಂಚನ….
ಬಯಸಿದೆ ತನುವು ಪ್ರೀತಿಯ ಆಲಿಂಗನ.

nodu noduta ninneya nayana…..
hrudayadi araLide ullaasada chethana…..
moodiside mogadalli naguvina sinchana…..
bayaside tanuvu preetiya aalingana.

_____________________________________________________

ಮೊದಲ ನೋಟ

ಮೊದಲ ಬಾರಿಗೆ ನಿನ್ನ ನೋಡಿದೆನು…….
ನಿನ್ನದೇ ನೆನಪಿನಲ್ಲಿ ಕವಿತೆ ಒಂದ ಬರಿದೆನು……
ಮನಸ್ಸಿನ ಮಧುರ ಭಾವನೆಗಳ ಅರಿತೆನು….
ಸುಂದರ ಕ್ಷಣಗಳ ಕನಸನು ಕಂಡೆನು
.

modala baarige ninna nodidenu……
ninnade nenapinalli kavithe onda baridenu….
manassina madhura baavanegala arithenu….
sundara kshanagaLa kanasanu kandenu.

_____________________________________________________

ಮುಗ್ದತೆ

ಒಮ್ಮೆ ಮತ್ತೆ ನಾ ಮಗುವಾಗಬೇಕು……
ಮುಗ್ದ ಮನಸ್ಸನ್ನು ಹೊಂದಲೇಬೇಕು….
ಪುಟ್ಟ ಕನಸುಗಳ ಕಾಣಲೆಬೇಕು…..
ಎಲ್ಲರ ನಗಿಸುತ ನಾ ನಗಬೇಕು.

omme matte naa maguvaagabeku…..
mugdha manassannu hondalebeku….
putta kanasugaLa kaaNalebeku….
yellara nagisutha naa nagabeku.

_____________________________________________________

ಬಾಳ ಸಂಗೀತ

ಬಾಳೆಂಬ ಸುಮಧುರ ರಾಗಕ್ಕೆ…….
ನಲಿವೆಂಬ ತಾಳ ಸೇರಿಸಿ……
ಸಂತಸದ ಭಾವ ತುಂಬಿ…….
ಎದೆ ತುಂಬಿ ಹಾಡುವೆ ನಾನು.

baaLemba sumadhura raagakke…..
nalivemba thaaLa serisi…..
santasada bhaava thumbi…
yede thumbi haadidenu.

_____________________________________________________

ತಳಮಳ

ಮನಸ್ಸು ನಿನ್ನ ಕಾಣಲು ಹಂಬಲಿಸುತ್ತಿದೆ……
ಹೃದಯದ ಮಾತು ಹೇಳಲು ತುಡಿಯುತ್ತಿದೆ…..
ಅಂದ ಚಂದದ ಕನಸು ಕಾಣುತ್ತಿದೆ……
ನಿನ್ನೊಟ್ಟಿಗೆ ಆ ಬಾನಲ್ಲಿ ತೇಲಿ ನಲಿಯುತ್ತಿದೆ.

manassu ninna kaaNalu hambalisuttide…..
hrudaya maatu heLalu tudiyuttide….
anda chandada kanasu kaanuttide….
ninnottige aa baanalli theli naliyuttide.

____________________________________________________

ಸಾದ್ಯವೇ

ಕಡಲ ಅಲೆಯ ತಡೆಯಲಾಗುವುದೇ……..
ಬಿರುಗಾಳಿಯ ಕೈಯಲ್ಲಿ ಹಿಡಿಯಲಾಗುವುದೇ…….
ಸುರಿವ ಮಳೆಯ ನಿಲ್ಲಿಸಲಾಗುವುದೇ……
ಹಾಗೆಯ ನನ್ನಿಂದ ಅವಳನ್ನು ದೂರ ಮಾಡಲಾಗುವುದೇ ????

kadala aleya tadeyalaaguvude……
birugaaLiya kaiyalli hidiyalaaguvude……
suriva maleya nillisalaaguvude…..
haageya nanninda avaLannu doora maadalaaguvude????

____________________________________________________

ಅಮ್ಮ

ಪ್ರೀತಿ ಪ್ರೇಮದ ಕಾರಂಜಿ ಅವಳು……
ಧರಣಿಗೆ ನನ್ನನ್ನು ತಂದಳು ಅವಳು…..
ಕೋಪ ತಾಪವ ತೋರದ ಅವಳು….
ನನ್ನ ಪ್ರೀತಿಯ ಅಮ್ಮ ಇವಳು.

Preethi premada kaaranji avaLu……
dharanige nannannu tandaLu avaLu……
kopa taapava torada avaLu……
nanna preethiya amma ivaLu.

____________________________________________________

ಕನಸು

ಕಣ್ಣ ನೋಟದಲ್ಲೇ ಈಗೆ ಕೊಲ್ಲುವೆಯ…???
ನನ್ನ ಮನದಲ್ಲಿ ಇಣುಕಿ ನೋಡುವೆಯ…???
ನಾ ಹೇಳದ ಮಾತನ್ನು ತಿಲಿಯುವೆಯ…???
ನಾ ಕಂಡ ಕನಸನ್ನು ನನಸು ಮಾಡುವೆಯ…?

KaNNa notadalle heege kolluveya ???
nanna manadalli iNuki noDuveya ???
naa heLada maatannu thiLiyuveya ???
naa kanDa kanasannu nanasu maaDuveya ?

____________________________________________________

ಬಯಕೆ

ನಿನ್ನ ಕಂಡೊಡನೆ ಮನವು ನಲಿಯುತ್ತದೆ……
ಪ್ರೀತಿಯ ಅಲೆಗಳ ಮೇಲೆ ತೇಲುತ್ತದೆ……
ನೋವಿನ ಕ್ಷಣಗಳ ಮರೆಯುತ್ತದೆ……
ಸದಾ ನಿನ್ನೊಟ್ಟಿಗೆ ಇರಲು ಬಯಸುತ್ತದೆ.

ninna kanDodade manavu naliyuttade……
preetiya alegaLa mele teluttade……
novina kshanagaLa mareyuttade……
sada ninnoTTige iralu bayasuttade.

____________________________________________________

ನಗುತಿರು

ನಿನ್ನ ನಗುವನ್ನು ಕಣ್ಣು ತುಂಬಿಸಿಕೊಳ್ಳುವಾಸೆ……
ನಿನ್ನ ಮಾತು ಸದಾ ಕೆಳುತ್ತಿರುವಾಸೆ……
ನನ್ನ ಹೃದಯ ಬಡಿತವ ನಿನಗೆ ಕೇಳುಸಿವಾಸೆ……
ಕೊಲ್ಲು….ಆದರೆ ಮಾಡಬೇಡ ನೀ ನಿರಾಸೆ.

ninna naguvanna kaNthumbisi koLLuvaase……
ninna maatu sada keLuttiruvaase……
nanna hrudaya baDitava ninage keLisuvaase……
kollu…..aadare maadabeda nee niraase.

____________________________________________________

ಗೆಳತಿ

ನನ್ನ ಸ್ನೇಹ ಬಯಸುವ ಹುಚ್ಚು ಹುಡುಗಿ……
ಮಗುವಿನಂತ ಮನಸಿನ ತುಂಟ ಬೆಡಗಿ……
ಇರುವೆ ನೀನು ನನ್ನ ಭಾವನೆಗಳ ಬಂಡಾರವಾಗಿ……
ಹೋಗದಿರು ಕಡೆತನಕ ಕಾಣದೆ ಮರೆಯಾಗಿ.

nanna sneha bayasuva hucchu huDugi……
maguvinanta manasina TunTa beDagi……
iruve neenu nanna bhaavanegaLa banDaaravaagi……
hogadiru kaDetanaka kaaNade mareyaagi.

____________________________________________________

ಪ್ರೀತಿಯ ಎಲ್ಲೆ

ಕನಸು ನನಸಿನ ಅಂತರ ಬಲ್ಲೆ…..
ಕನಸಿಗೆ ಇಲ್ಲವೆ ಯಾವುದೇ ಎಲ್ಲೆ…..
ನಾ ಕಂಡ ಕನಸನ್ನು ನೀನು ಬಲ್ಲೆ…..
ಅದ ನನಸಾಗಿಸದೆ ನಾ ನಿನ್ನ ಬಿಡಲೊಲ್ಲೆ.

kanasu nanasina antara balle….
kanasige illave yaavude elle…
naa kanDa kanasannu neenu balle……
ada nanasaagisade naa ninna bidalolle.

____________________________________________________

ಜೊತೆಯಲಿ

ನಿನ್ನ ಮೊಗವ ನೋಡಲು ಅಂದ…..
ನಿನ್ನ ನುಡಿಯ ಕೇಳಲು ಚೆಂದ…..
ಇಬ್ಬರ ನಡುವಿನ ಈ ಅನುಬಂಧ…..
ಸದಾ ಕಾಲ ನೀ ಜೊತೆಗಿರೆ ಪರಮಾನಂದ.

ninna mogava noDalu anda……
ninna nuDiya keLalu chenda……
ibbara naDuvina ee anubandha……
sada kaala nee jothegire paramaananda.

____________________________________________________

ಹೇಗೆ

ಮನದ ಮಾತನ್ನ ಹೇಗೆ ಹೇಳಲಿ……
ನಿನ್ನ ಅಂತರಂಗವ ಹೇಗೆ ತಿಳಿಯಲಿ…..
ನಿನ್ನ ವಿನಃ ಕನಸು ಹೇಗೆ ಕಾಣಲಿ……..
ನೀನೆ ಹೇಳು ಹೇಗೆ ಇದನ್ನ ನಿನಗೆ ತಿಳಿಸಲಿ.

manada maatanna hege heLali…..
ninna antarangava hege tiLiyali…..
ninna vinaha kanasu hege kaaNali…
neene heLu hege idanna ninage tiLisali.

____________________________________________________

ಹೇಳು ಮಾಡುವೆಯ???

ಮನಸುಗಳ ನಡುವಿನ ಪ್ರೀತಿಯ ಕದನ……
ಬರೆದೆ ನಾನು ನಿನಗಾಗಿ ಈ ಕವನ……..
ನನ್ನ ಹೃದಯ ಬಡಿತಕ್ಕೆ ತೋರುವೆಯ ಸ್ಪಂದನ……..
ಬಾಡಿದ ಮೊಗದಲ್ಲಿ ಅರಳಿಸುವೆಯ ನಗುವಿನ ಸಿಂಚನ.

manasugaLa naduvina preetiya kadana……
barede naanu ninagaagi ee kavana……
nanna hrudaya baditakke toruveya spandana…….
baadida mogadalli araLisuveya naguvina sinchana.

____________________________________________________

ಮುಂಗಾರು ಮಳೆ

ಶುರುವಾಗಿದೆ ಮನದಲ್ಲಿ ಮುಂಗಾರು ಮಳೆ…….
ನೀನು ನೆನೆಯುವೆ ಇದರಲ್ಲಿ ಇಂದು ಅಥವಾ ನಾಳೆ…..
ಹರಿಯುತಿದೆ ಹೃದಯದಿ ಒಲವಿನ ಹೊಳೆ……..
ನೀ ಮೂಡಿಸಿದೆ ನನ್ನ ಮೊಗದಲ್ಲಿ ಗೆಲುವಿನ ಕಳೆ.

shuruvaagide manadalli mungaaru maLe……
neenu neneyuve idaralli indu athava naaLe…….
hariyuttide hrudayadi olavina hoLe…….
nee moodiside nanna mogadalli geluvina kaLe.

____________________________________________________

ಪ್ರೀತಿಯ ಚಿಗುರು

ನೋಡು ನೋಡುತ್ತಾ ಪ್ರೀತಿ ಪ್ರೇಮದ ಹಸಿರು……
ನನಗೆ ಗೊತ್ತಿಲ್ಲದಂತೆ ನನ್ನ ಮನದಲ್ಲಿ ಒಂದು ಚಿಗುರು……..
ಕುಡಿ ಒಡೆಯುತ್ತಿದೆ, ಹೇಳುತ್ತಾ ನಿನ್ನೆಯ ಹೆಸರು……
ನಿನ್ನ ನೆನೆಯದೆ ಹೊರ ಬಾರದು ನನ್ನೆಯ ಉಸಿರು.

noDu noDutta preeti premada hasiru……
nanage gottilladante nanna manadalli ondu chiguru…..
kuDi yodeyuttide, heLutta ninneya hesaru……
ninna neneyade hora baaradu nanneya usiru.

____________________________________________________

ಮನಸಿನ ಅಲೆಗಳು

ಅಲೆಗಳ ಮೇಲೆ ತೇಲುವ ಮನವು…..
ಗಾಳಿಯ ಸೊಬಗನು ಹೀರುವ ತನುವು…..
ಮೂಡಿದೆ ಹೃದಯದಿ ಪ್ರೇಮದ ಒಲವು…..
ಕಾಣದೆ ನಿನ್ನ ಆಗಿದೆ ಕ್ಷಣಗಳು ಯುಗವು.

alegala mele teluva manavu……
gaaLiya sobaganu heeruva tanuvu……
moodide hrudayadi premada olavu……
kaanade ninna aagide kshanagalu yugavu.

____________________________________________________

ಹೆಜ್ಜೆಗಳು

ಹುಡುಕಿದೆ ನಿನ್ನೆಯ ಹೆಜ್ಜೆಯ ಗುರುತು……
ಹಾಡಿದೆ ಬಾರದ ಹಾಡನು ಕಲಿತು…….
ಕುಣಿದೆನು ನಾನು ಮೈ ಮನ ಮರೆತು…..
ಪ್ರೀತಿಗೆ ಸೋಲನು ಒಪ್ಪೆನು ನಿನ್ನ ಪಡೆಯದ ಹೊರತು.

hudukide ninneya hejjeya gurutu…….
haadide baarada haadanu kalitu…….
kunidenu naanu mai mana maretu…….
preetige solanu oppenu ninna padeyada horatu.

____________________________________________________

ಸೂರ್ಯ ಚಂದಿರ

ಕೆಂಪಗೆ ಕಾಣುವ ಇರುಳಿನ ಸೂರ್ಯನು……
ಹೋಗುತ್ತಾ ನನ್ನೆಯ ಕನಸನು ಕದ್ದನು……
ನೊಂದ ಮನಸಲ್ಲಿ ಕಾಯುತ ಕುಳಿತೆನು……
ಹೊಸ ಕನಸೊಂದಿಗೆ ನಗುತ ಚಂದಿರ ಬಂದನು.

kempage kaanuva irulina sooryanu……
hoguta nanneya kanasanu kaddanu……
nonda manasalli kaayuta kuLitenu…….
hosa kanasondige naguta chandira bandanu.

____________________________________________________

ಮನದ ಮಾತು

ಮದುರ ಮನಸ್ಸಿನ ಮಾತನ್ನು ಕೇಳು………
ನನಗು ಅದು ಅರ್ಥವಾಗುವಂತೆ ಹೇಳು……..
ಪ್ರೀತಿ ತುಂಬಿದ ಮನಸ್ಸಿಗೆ ಇಲ್ಲವೇ ಗೋಳು……
ಇದನ್ನು ಅರಿತರೆ ಸುಂದರ ಇಬ್ಬರ ಬಾಳು.

madura manassina maatannu keLu…….
nanagu adu arthavaaguvante heLu…….
preeti thumbida manassige illave goLu…..
idannu aritare sundara ibbara baaLu.


Actions

Information

12 responses

3 04 2008
Anonymous

Great goin chikki….. keep up the good job!! :-)

29 04 2008
Anonymous

Nice one again :)
I am liking evry bit of it! :)

20 05 2008
sowmya

Chikki,its really very gud,heart touching…..
I really enjoyed every bit….
simply great.

21 05 2008
Sindhu

Thanks for updating the blog on request :)
Tumbaaa sogasagide yella padyagaLu… bhaavaatmaka…
ObbanTiga, Koorike and TaLamaLa are awesome and heart touching… my favorites now :)
Heege barithiru…

21 05 2008
Sindhu

BTW, nin blog link na nan blog alli add maaDidini…

18 06 2008
sowmya

hey chikki,
Therez spell mistake in “bayake”.
second line last word.

29 07 2008
prakruthi

hey chikki,
tumba chennagide kano padyagalu
odid admele ishtu bega mugidoyitalla anta bejaru ayitu.
ninna manadalada matugalige padyada roopa kotuu matte upload madu
nanantu kandita oduve

14 03 2009
GK

ತುಂಬಾನೆ ಸೊಗಸಾಗಿವೆ ಕವನಗಳು ,
ಓದಿ ಮನಸ್ಸಿಗೆ ಆನಂದವಾಯ್ತು ,
ಧನ್ಯವಾದಗಳು ಚಿಕ್ಕಿ (ಶ್ರೀಕಾಂತ್)

ಕುಮಾರ್

3 02 2010
komala

ur poetry is very beautiful and meaningful, its very nice to read and heart touching words

3 01 2011
2010 in review « Never Again

[...] ನನ್ನ ಸಣ್ಣ ಚುಟುಕು ಪದ್ಯಗಳು…. October 2007 9 comments 4 [...]

25 06 2011
sri crazy boy

nenedare nenapaguva. baredare bareyuva.odidare odabekenisuva.e nimma preethiya kavanava. na mecchide e nimmaya olava.

12 10 2011
suresha.h.r

TUMBHA TUMBHA NE ARTA GARBHITA VADA E KAVANA GALANNU ODI MANAVAGIDE REKKE BADIYADE GALIYAJOTE SARAGAVAGI TELUVA HAKKI TUMBA DANYAVADAGALU

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s




Follow

Get every new post delivered to your Inbox.